ಮನ್ ಮನಾ ಭವ ಮದ್ ಭಕ್ತೋ ಮದ್ ಯಾಜಿ ಮಾಂ ನಮಸ್ಕುರು ( ಭ.ಗೀತಾ ೧೮.೬೫), ಕೃಷ್ಣ "ಯಾವಾಗಲೂ ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಚಿಂತಿಸುತ್ತಿರು" ಎಂದು ಹೇಳುತ್ತಾನೆ. ಮನ್-ಮನಾ. ಮನ ಎಂದರೆ ಮನಸ್ಸು. ಮನ್ ಮನಾ ಭವ ಮದ್ ಭಕ್ತೋ, "ಮತ್ತು ನನ್ನ ಭಕ್ತನಾಗು. ನನ್ನನ್ನು ನಿನ್ನ ಶತ್ರು ಎಂದು ಭಾವಿಸಬೇಡ. "ಕೆಲವೊಮ್ಮೆ ಕ್ರಷ್ಣನನ್ನು ಶತ್ರು ಎಂದು ಭಾವಿಸಲಾಗುತ್ತದೆ. ಆ ರೀತಿಯ ಆಲೋಚನೆಯು ನಿಷ್ಪ್ರಯೋಜಕವಾಗಿದೆ. ನಿಷ್ಪ್ರಯೋಜಕವಲ್ಲ. ಖಂಡಿತವಾಗಿಯೂ, ಶತ್ರುಗಳು ಯಾರು ಯಾವಾಗಲೂ ಕೃಷ್ಣನ ಬಗ್ಗೆ ಯೋಚಿಸಿದರೋ , ಅವರೂ ಸಹ ಮೋಕ್ಷವನ್ನು ಪಡೆದರು. ಏಕೆಂದರೆ, ಅಂತಿಮವಾಗಿ, ಅವರು ಕೃಷ್ಣನ ಬಗ್ಗೆ ಯೋಚಿಸಿದರು. ಆದರೆ ಆ ರೀತಿಯಲ್ಲಿ ಅಲ್ಲ. "
|