"ಸಂಪೂರ್ಣ ವ್ಯವಹಾರವು ಕೃಷ್ಣನ ಅನುಬಂಧನವನ್ನು ಹೇಗೆ ಅಭಿವೃದ್ಧಿಪಡಿಸುವುದಕ್ಕೆ. ನೀವು ಆ ಅನುಬಂಧನವನ್ನು ಒಂದು ಸೆಕೆಂಡ್ನಲ್ಲಿ ಅಭಿವೃದ್ಧಿಪಡಿಸಿದರೆ, ಓಹ್, ನಂತರ ವ್ಯವಹಾರವು ಒಂದು ಸೆಕೆಂಡಿನೊಳಗೆ ಮುಗಿಯುತ್ತದೆ. ಮತ್ತು ನೀವು ಆ ಅನುಬಂಧನವನ್ನು ವರ್ಷಾಂತರಗಳಾದರೂ ಅಭಿವೃದ್ಧಿಪಡಿಸಲು ಸಾಧ್ಯವಾಗದಿದ್ದರೆ, ಆಗ ಅದು ತುಂಬಾ ಕಷ್ಟ. ಒಂದೇ ಪರೀಕ್ಷೆ ಎಂದರೆ ನಿಮ್ಮ ಕೃಷ್ಣನ ಜೊತೆಗಿನ ಬಾಂಧವ್ಯವನ್ನು ನೀವು ಹೇಗೆ ಅಭಿವೃದ್ಧಿಪಡಿಸಿದ್ದೀರಿ ಎಂಬುದು. ನೀವು ಅದರ ಬಗ್ಗೆ ಗಂಭೀರವಾಗಿದ್ದರೆ, ಅದನ್ನು ಒಂದು ಸೆಕೆಂಡಿನೊಳಗೆ ಮಾಡಬಹುದು. ನೀವು ಅದರ ಬಗ್ಗೆ ಗಂಭೀರವಾಗಿರದಿದ್ದರೆ, ಅದನ್ನು ಅನೇಕ ಜೀವನದಲ್ಲಿಯೂ ಮಾಡಲಾಗುವುದಿಲ್ಲ. ಆದ್ದರಿಂದ ಅದು ನಿಮ್ಮ ಗಂಭೀರ ಸ್ವರೂಪವನ್ನು ಅವಲಂಬಿಸಿರುತ್ತದೆ. ಕೆಲವು ನಿರ್ದಿಷ್ಟ ಸಮಯ ನಿಗದಿ ಪಡಿಸಲು ಕೃಷ್ಣ ಎಂಬುವುದು ಬೌತಿಕ ವಿಷಯವಲ್ಲ, ಅಥವಾ ... ಇಲ್ಲ. ಏಕೈಕ ವಿಷಯವೆಂದರೆ ಮಯ್ಯಾಸಕ್ತ-ಮನಾ (ಭ. ಗೀತಾ ೦೭.೦೧). ನಿಮ್ಮ ಕೃಷ್ಣನ ಬಾಂಧವ್ಯವನ್ನು ಸಂಪೂರ್ಣವಾಗಿ ನೀವು ಅಭಿವೃದ್ಧಿಪಡಿಸಬೇಕು. "
|