"ಸ್ವಕರ್ಮಣಾ ತಮ್ ಅಭ್ಯರ್ಚ್ಯ ಎಂದು ಕೃಷ್ಣ ಹೇಳುತ್ತಾನೆ. ನಿಮ್ಮ ಉದ್ಯೋಗದ ಫಲದಿಂದ ನೀವು ಪರಮ ಪುರುಷ ಭಗವಂತನನ್ನು ಆರಾಧಿಸಲು ಪ್ರಯತ್ನಿಸಿ. ಏಕೆಂದರೆ ಕೃಷ್ಣನಿಗೆ ಎಲ್ಲವೂ ಬೇಕಾಗುತ್ತದೆ. ಆದ್ದರಿಂದ ನೀವು ಕುಂಬಾರರಾಗಿದ್ದರೆ, ನೀವು ಮಡಕೆಗಳನ್ನು ಪೂರೈಸಿರಿ. ನೀವು ಹೂಗಾರರಾಗಿದ್ದರೆ, ನೀವು ಹೂವನ್ನು ಪೂರೈಸಿರಿ. ನೀವು ಬಡಗಿ ಆಗಿದ್ದರೆ, ನೀವು ದೇವಸ್ಥಾನಕ್ಕಾಗಿ ಕೆಲಸ ಮಾಡಿ. ನೀವು ಅಗಸನಾಗಿದ್ದರೆ, ದೇವಾಲಯದ ಬಟ್ಟೆಗಳನ್ನು ತೊಳೆಯಿರಿ. ದೇವಾಲಯವು ಕೇಂದ್ರ, ಕೃಷ್ಣ. ಮತ್ತು ಪ್ರತಿಯೊಬ್ಬರೂ ತಮ್ಮ ಸೇವೆಯನ್ನು ನೀಡಲು ಅವಕಾಶವನ್ನು ಪಡೆಯುತ್ತಾರೆ. ಆದ್ದರಿಂದ ದೇವಾಲಯದ ಪೂಜೆ ಬಹಳ ಪ್ರಿಯವಾಗಿರುತ್ತದೆ. ಆದ್ದರಿಂದ ಈ ದೇವಾಲಯವನ್ನು ನಮಗೆ ಯಾವುದೇ ಹಣದ ಅಗತ್ಯವಿಲ್ಲದ ರೀತಿಯಲ್ಲಿ ಸಂಘಟಿಸಬೇಕು. ನೀವು ನಿಮ್ಮ ಸೇವೆಯನ್ನು ನೀಡಿ. ಅದಷ್ಟೇ. ನಿಮ್ಮ ಸೇವೆಯಲ್ಲಿ ನೀವು ತೊಡಗಿಸಿಕೊಂಡಿರಿ. ನಿಮ್ಮ ಸೇವೆಯನ್ನು ಬದಲಾಯಿಸಬೇಡಿ. ಆದರೆ ನೀವು ಸೇವೆ ಮಾಡಲು ಪ್ರಯತ್ನಿಸಿ ದೇವಾಲಯವನ್ನು ಅಂದರೆ ಸರ್ವೋಚ್ಚ ಭಗವಂತನನ್ನು - ನಿಮ್ಮ ಉದ್ಯೋಗದ ಕರ್ತವ್ಯದಿಂದ. "
|