"ಬಹೂನಾಮ್ ಜನ್ಮನಾಮ್, ಅನೇಕ, ಅನೇಕ ಜನನಗಳ ನಂತರ, ಕೆಲವು ನಿಜವಾದ ಭಕ್ತರನ್ನು ಭೇಟಿಯಾಗುವಷ್ಟು ಅವರು ಅದೃಷ್ಟವಂತರಾಗಿದ್ದರೆ, ಆಗ ಅವನಿಗೆ ಜ್ಞಾನೋದಯವಾಗುತ್ತದೆ. ಮತ್ತು ವಾಸುದೇವಃ ಸರ್ವಂ ಇತಿ (ಭ. ಗೀತಾ ೭.೧೯), ನಂತರ ಅವನು ವಾಸುದೇವ, ಕೃಷ್ಣನನ್ನು, ಎಲ್ಲವೂ ಎಂದು ಒಪ್ಪಿಕೊಳ್ಳುತ್ತಾನೆ. ಸ ಮಹತ್ಮಾ ಸು- ದುರ್ಲಭ: "ಅಂತಹ ಮಹಾನ್ ಆತ್ಮವು ಬಹಳ ವಿರಳವಾಗಿದೆ." ಆದ್ದರಿಂದ ಹರೇ ಕೃಷ್ಣ ಎಂದು ಜಪಿಸುವ ಮೂಲಕ ಆ ಮಹಾನ್ ಆತ್ಮದ ಪದವಿಯನ್ನು ನೇರವಾಗಿ ಪಡೆಯುವ ಅವಕಾಶ ಇಲ್ಲಿದೆ. ಆದ್ದರಿಂದ ಇದು ಬಹಳ ವೈಜ್ಞಾನಿಕವಾಗಿದೆ. ಈ ಆಂದೋಳನವನ್ನು ವೈಜ್ಞಾನಿಕವಾಗಿ, ತಾತ್ವಿಕವಾಗಿ, ತಾರ್ಕಿಕವಾಗಿ ಅರ್ಥಮಾಡಿಕೊಳ್ಳಲು ಬಯಸುವ ಯಾವುದೇ ವ್ಯಕ್ತಿಗೆ ನಾವು ಈ ಸೂತ್ರವನ್ನು ಪ್ರಸ್ತುತಪಡಿಸಬಹುದು. ಈ ಆಂದೋಳನದಲ್ಲಿ ಈ ಎಲ್ಲ ವಿಷಯಗಳಿಗೆ ಕೊರತೆಯಿಲ್ಲ. "
|