KN/680720b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರಕೃತಿಯ ಕಾರ್ಯವು ಅತ್ಯದ್ಭುತವಾಗಿ ನಡೆಯುತ್ತಿದೆ. ನನ್ನಂತೆಯೇ ... ಅಂದರೆ ... ಜೀವಾತ್ಮದ ಉಪಸ್ಥಿತಿಯಿಂದಾಗಿ ಅನೇಕ ವಿಷಯಗಳು ಅತ್ಯದ್ಭುತವಾಗಿ ನಡೆಯುತ್ತಿವೆ. ಅದೇ ರೀತಿಯಲ್ಲಿ, ಈ ಪ್ರಕೃತಿಯ ಎಲ್ಲಾ ಕೆಲಸಗಳು ಅತ್ಯದ್ಭುತವಾಗಿ ನಡೆಯುತ್ತಿವೆ ಪರಮಾತ್ಮನಾದ ಭಗವಂತನ ಉಪಸ್ಥಿತಿಯಿಂದಾಗಿ. ಇದು ಭೌತಿಕ ಪ್ರಕೃತಿಯ ತಿಳುವಳಿಕೆ. ನಂತರ ದೇವರು, ಜೀವಾತ್ಮ, ಭೌತಿಕ ಪ್ರಕೃತಿ, ಮತ್ತು ನಂತರ ಕಾಲ. ಕಾಲವು ಅನಂತ. ಅಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯವಿಲ್ಲ. ಇದು ನನ್ನ ಲೆಕ್ಕಾಚಾರ, ಪ್ರಕಾರ .. ಅದು ಸಾಪೇಕ್ಷತೆ. ಅದು ಪ್ರೊಫೆಸರ್ ಐನ್‌ಸ್ಟೈನ್ ಅವರ ಆಧುನಿಕ ವೈಜ್ಞಾನಿಕ ಪ್ರತಿಪಾದನೆಯಾಗಿದೆ.ನಿಮ್ಮ ಸಮಯ ಮತ್ತು ನನ್ನ ಸಮಯ ... ಉನ್ನತ ಗ್ರಹಗಳಲ್ಲಿನ ಸಮಯದ ಅಂಶವು ವಿಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ. ಉನ್ನತ ಗ್ರಹಗಳಲ್ಲಿ ಸಮಯದ ಅಂಶ - ನಮ್ಮ ಆರು ತಿಂಗಳುಗಳು ಅವರ ಒಂದು ದಿನ. ನಮ್ಮ ಅನೇಕ ಯುಗಗಳು ಬ್ರಹ್ಮನ ಹನ್ನೆರಡು ಗಂಟೆಗಳನ್ನು ಮಾಡುವಂತೆಯೇ. ಆದ್ದರಿಂದ ಸಮಯವು ವಿಭಿನ್ನ ವಸ್ತುವಿನ ಪ್ರಕಾರ. ಆದರೆ ಕಾಲವು ಅನಂತ. ವಾಸ್ತವವಾಗಿ, ಭೂತ, ವರ್ತಮಾನ, ಭವಿಷ್ಯ ಅಥವಾ ಮಿತಿಗಳಿಲ್ಲ. ಇದು ಕಾಲದ ಪರಿಜ್ಞಾನ. "
680720 - ಉಪನ್ಯಾಸ ಭ. ಗೀತಾ ಆಯ್ದ ಭಾಗಗಳು - ಮಾಂಟ್ರಿಯಲ್