"ಆದ್ದರಿಂದ ದೇವರ ಇನ್ನೊಂದು ಹೆಸರು ಅಧೋಕ್ಷಜಾ, ಅಂದರೆ ನಮ್ಮ ಗ್ರಹಿಕೆಗೆ ಮೀರಿದ್ದು ಎಂದು ಅರ್ಥ. ನೀವು ನೇರವಾಗಿ ನೋಡುವ ಮೂಲಕ ಅಥವಾ ನೇರವಾಗಿ ಅಘ್ರಾಣಿಸುವ ಮೂಲಕ ಅಥವಾ ನೇರವಾಗಿ ಕೇಳುವ ಮೂಲಕ ಅಥವಾ ನೇರವಾಗಿ ರುಚಿ ಅಥವಾ ಸ್ಪರ್ಶಿಸುವ ಮೂಲಕ ದೇವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದದ ಹೊರತು ಪ್ರಸ್ತುತ ಕ್ಷಣದಲ್ಲಿ ಅದು ಸಾಧ್ಯವಿಲ್ಲ, ನಮ್ಮ ನೋಡುವ ಶಕ್ತಿಯನ್ನು ಸರಿಪಡಿಸದ ಹೊರತು, ನಮ್ಮ ಶ್ರವಣ ಶಕ್ತಿಯನ್ನು ಮಾರ್ಪಡಿಸದ ಹೊರತು. ಈ ರೀತಿಯಾಗಿ, ಯಾವಾಗ ನಮ್ಮ ಇಂದ್ರಿಯಗಳು ಶುದ್ಧೀಕರಿಸುತ್ತವೋ, ಆಗ ನಾವು ದೇವರ ಬಗ್ಗೆ ಕೇಳಬಹುದು, ನಾವು ದೇವರನ್ನು ನೋಡಬಹುದು, ನಾವು ದೇವರನ್ನು ಅಘ್ರಾಣಿಸಬಹುದು, ನಾವು ದೇವರನ್ನು ಸ್ಪರ್ಶಿಸಬಹುದು. ಅದು ಸಾಧ್ಯ. ಆ ವಿಜ್ಞಾನದಲ್ಲಿ ತರಬೇತಿ ಹೊಂದುವುದು, ದೇವರನ್ನು ಹೇಗೆ ನೋಡಬೇಕು, ದೇವರನ್ನು ಹೇಗೆ ಕೇಳಬೇಕು, ನಿಮ್ಮ ಇಂದ್ರಿಯಗಳಿಂದ ದೇವರನ್ನು ಹೇಗೆ ಸ್ಪರ್ಶಿಸಬೇಕು, ಸಾಧ್ಯ. ಆ ವಿಜ್ಞಾನವನ್ನು ಭಕ್ತಿ ಸೇವೆ ಅಥವಾ ಕೃಷ್ಣ ಪ್ರಜ್ಞೆ ಎಂದು ಕರೆಯಲಾಗುತ್ತದೆ."
|