"ಸಾಮಾನ್ಯವಾಗಿ, ಜನರು, ಅವರು ಇಂದ್ರಿಯಗಳ ಸೇವಕರು. ಯಾವಾಗ ಜನರು, ಯಾವಾಗ ಮನುಷ್ಯನು ಇಂದ್ರಿಯಗಳ ಸೇವಕನಾಗುವ ಬದಲು, ಅವನು ಯಾವಾಗ ಇಂದ್ರಿಯಗಳ ಯಜಮಾನನಾಗುತ್ತಾನೋ, ಆಗ ಅವನನ್ನು ಸ್ವಾಮಿ ಎಂದು ಕರೆಯಲಾಗುತ್ತದೆ. ಸ್ವಾಮಿ ಈ ಉಡುಗೆ ಅಲ್ಲ. ಈ ಉಡುಗೆ ಅನಗತ್ಯವಾದದ್ದು. ಕೇವಲ ... ಎಲ್ಲೆಡೆ ಇರುವಂತೆ "ಅವನು, ಅವನು" ಎಂದು ಅರ್ಥಮಾಡಿಕೊಳ್ಳಲು ಕೆಲವು ಸಮವಸ್ತ್ರದ ಉಡುಗೆಗಳಿವೆ. ವಾಸ್ತವವಾಗಿ, ಸ್ವಾಮಿ ಎಂದರೆ ಯಾರು ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿರುವವರೋ. ಮತ್ತು ಅದು ಬ್ರಾಹ್ಮಣ ಸಂಸ್ಕೃತಿ. ಸತ್ಯ ಶಮ ದಮ ತಿತಿಕ್ಷ ಆರ್ಜವಮ್, ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್ ಬ್ರಹ್ಮ-ಕರ್ಮ ಸ್ವಭಾವ-ಜಮ್ (ಭ. ಗೀತಾ ೧೮.೪೨). ಬ್ರಹ್ಮ. ಬ್ರಹ್ಮ ಎಂದರೆ ಬ್ರಾಹ್ಮಣ, ಬ್ರಾಹ್ಮಣ ಸಂಸ್ಕೃತಿ. ಸತ್ಯತೆ, ಸ್ವಚ್ಛತೆ, ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವುದು, ಮನಸ್ಸನ್ನು ನಿಯಂತ್ರಿಸುವುದು ಮತ್ತು ಸರಳತೆ ಮತ್ತು ಸಹಿಷ್ಣುತೆ, ಪೂರ್ಣಜ್ಞ, ಜೀವನದಲ್ಲಿ ಪ್ರಾಯೋಗಿಕ ಅನ್ವಯಿಕೆ, ದೇವರಲ್ಲಿ ವಿಶ್ವಾಸ-ಈ ಅರ್ಹತೆಗಳು ಬ್ರಾಹ್ಮಣ ಸಂಸ್ಕೃತಿ. ನಾವು ಈ ಅರ್ಹತೆಗಳನ್ನು ಎಲ್ಲಿ ಅಭ್ಯಾಸ ಮಾಡಿದರೂ ಅವನು ಬ್ರಾಹ್ಮಣ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತಾನೆ. "
|