"ಸ್ವಯಂಪ್ರೇರಿತ ಪ್ರೀತಿ ... ಉದಾಹರಣೆ ನೀಡಲಾಗಿದೆ: ಹೇಗೆ ಒಬ್ಬ ಯುವಕ, ಯುವತಿ, ಯಾವುದೇ ಪರಿಚಯವಿಲ್ಲ, ಒಬ್ಬರನ್ನೊಬ್ಬರು ನೋಡಿದಾಗ, ಅಲ್ಲಿ ಸ್ವಲ್ಪ ಪ್ರೀತಿಯ ಒಲವು ಇರುತ್ತದೆ. ಅದನ್ನು ಸ್ವಯಂಪ್ರೇರಿತ ಎಂದು ಕರೆಯಲಾಗುತ್ತದೆ. ಒಬ್ಬರು ಹೇಗೆ ಪ್ರೀತಿಸಬೇಕೆಂದು ಕಲಿಯಬೇಕಾಗಿಲ್ಲ. ಕೇವಲ ದೃಷ್ಟಿಯೇ ಪ್ರೀತಿಯ ಪ್ರವೃತ್ತಿಯನ್ನು ಆಹ್ವಾನಿಸುತ್ತದೆ. ಅದನ್ನು ಸ್ವಯಂಪ್ರೇರಿತ ಎಂದು ಕರೆಯಲಾಗುತ್ತದೆ. ದೇವರನ್ನು ಪ್ರೀತಿಸುವ ವಿಷಯದಲ್ಲಿ ನಾವು ಪ್ರಗತಿ ಹೊಂದಿದಾಗ, ದೇವರ ಬಗ್ಗೆ ನೀವು ಏನನ್ನಾದರೂ ನೋಡಿ್ದರೆ ಅಥವಾ ಜ್ಞಾಪಿಸಿಕೊಂಡರೆ ಕೂಡಲೇ ನೀವು ಭಾವಪರವಶರಾಗುತ್ತೀರಿ, ಅದು ಸ್ವಯಂಪ್ರೇರಿತವಾಗಿರುತ್ತದೆ. ಶ್ರೀ ಚೈತನ್ಯ ಮಹಾಪ್ರಭುಗಳಂತೆಯೇ, ಅವರು ಜಗನ್ನಾಥ ದೇವಸ್ಥಾನದೊಳಗೆ ಪ್ರವೇಶಿಸಿದಾಗ, ಜಗನ್ನಾಥನನ್ನು ನೋಡಿದ ಕೂಡಲೇ, "ಇಲ್ಲಿ ನನ್ನ ಪ್ರಭು" ಎನ್ನುತ್ತಾ ಪ್ರಜ್ಞೆ ತಪ್ಪಿದರು.
|