KN/690116 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬರು ಭೋಗಿಸುವ ಇಚ್ಛೆಯನ್ನು ತ್ಯಜಿಸಬೇಕು. ಖಂಡಿತವಾಗಿಯೂ, ಈ ಭೌತಿಕ ಜೀವನದಲ್ಲಿ ನಾವು ನಮ್ಮ ಇಂದ್ರಿಯಗಳನ್ನು ಪಡೆದುಕೊಂಡಿದ್ದೇವೆ ಮತ್ತು ಅವುಗಳನ್ನು ಬಳಸಲು ನಾವು ಒಗ್ಗಿಕೊಂಡಿದ್ದೇವೆ. ನಾವು ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಆದರೆ ಅದನ್ನು ನಿಯಂತ್ರಿಸುತ್ತೇವೆ. ಹೇಗೆ ನಾವು ತಿನ್ನಲು ಇಚ್ಛಿಸುತ್ತೇವೆಯೋ. ವಿಷಯ ಎಂದರೆ ತಿನ್ನುವುದು, ಮಲಗುವುದು, ಸಂಭೋಗ ಮಾಡುವುದು ಮತ್ತು ರಕ್ಷಿಸಿಕೊಳ್ಳುವುದು. ಆದ್ದರಿಂದ ಈ ವಿಷಯಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ, ಆದರೆ ನನ್ನ ಕೃಷ್ಣ ಪ್ರಜ್ಞೆಯನ್ನು ಕಾರ್ಯಗತಗೊಳಿಸಲು ಅನುಕೂಲಕರವಾಗುವಂತೆ ಅವುಗಳನ್ನು ಅಳವಡಿಸಕೊಳ್ಳಲಾಗಿದೆ. ಆದ್ದರಿಂದ ನಾವು ತೆಗೆದುಕೊಳ್ಳಬಾರದು ... ತಿನ್ನುವ ಹಾಗೆಯೇ. ನಾವು ರುಚಿಯನ್ನು ಪೂರೈಸಲು ಮಾತ್ರ ತಿನ್ನಬಾರದು. ಕೃಷ್ಣ ಪ್ರಜ್ಞೆಯನ್ನು ಕಾರ್ಯಗತಗೊಳಿಸಲು ನಮ್ಮನ್ನು ನಾವು ಸಧೃಡ ವಾಗಿಟ್ಟುಕೊಳ್ಳಲು ಮಾತ್ರ ನಾವು ತಿನ್ನಬೇಕು. ಆದ್ದರಿಂದ ತಿನ್ನುವುದನ್ನು ನಿಲ್ಲಿಸಿಲ್ಲ, ಆದರೆ ಅದನ್ನು ಅನುಕೂಲಕರವಾಗಿ ನಿಯಂತ್ರಿಸಲಾಗಿದೆ. ಅಂತೆಯೇ, ಸಂಭೋಗ. ಸಂಭೋಗವನ್ನು ಸಹ ನಿಲ್ಲಿಸಿಲ್ಲ. ಆದರೆ ನಿಯಂತ್ರಕ ತತ್ವವೆಂದರೆ ನೀವು ಮದುವೆಯಾಗಬೇಕು ಮತ್ತು ನೀವು ಕೃಷ್ಣ ಪ್ರಜ್ಞಾವಂತ ಮಕ್ಕಳನ್ನು ಪಡೆಯಲು ಮಾತ್ರ ಲೈಂಗಿಕ ಜೀವನವನ್ನು ಹೊಂದಿರಬೇಕು. ಇಲ್ಲದಿದ್ದರೆ ಅದನ್ನು ಮಾಡಬೇಡಿ. "

690116 -ಪರಮ ಕೊರುಣ ಭಜನೆ ಮತ್ತು ಭಾವಾರ್ಥ - ಲಾಸ್ ಎಂಜಲೀಸ್