"ಕಲೌ, ಈ ಕಲಿ ಕಾಲದಲ್ಲಿ ಹರೇ ಕೃಷ್ಣ, ಹರೇ ಕೃಷ್ಣ, ಎಂದು ಸುಮ್ಮನೆ ಜಪಿಸುತ್ತಿರುವುದು, ಕಲೌ ನಾಸ್ತಿ ಏವಾ, ನಾಸ್ತಿ ಏವಾ, ನಾಸ್ತಿ ಏವಾ: ಬೇರೇನೂ ಪರ್ಯಾಯವಿಲ್ಲ, ಬೇರೇನೂ ಪರ್ಯಾಯವಿಲ್ಲ, ಬೇರೇನೂ ಪರ್ಯಾಯವಿಲ್ಲ. ನೀವು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, ಈ ಭಕ್ತಿ- ಯೋಗ ವ್ಯವಸ್ಥೆ, ತುಂಬಾ ಸರಳವಾಗಿದೆ, ಸುಮ್ಮನೆ ಜಪಿಸುತ್ತಿರುವುದು, ನೀವು ಫಲಿತಾಂಶವನ್ನು ತಕ್ಷಣ ಕಾಣುವಿರಿ. ಪ್ರತ್ಯಕ್ಷಾವಗಮಮ್ ಧರ್ಮ್ಯಂ (ಭ. ಗೀತಾ ೯.೨). ಬೇರೆ ಯಾವುದೇ ಯೋಗ ವ್ಯವಸ್ಥೆಯನ್ನು ನೀವು ಅಭ್ಯಾಸ ಮಾಡಿದರೆ, ನೀವು ಅಜ್ಞಾನದಲ್ಲಿರುವಿರಿ ; ನೀವು ಎಷ್ಟು ದೂರ ಪ್ರಗತಿ ಸಾಧಿಸಿರುವಿರೆಂದು ನಿಮಗೆ ತಿಳಿಯುವುದಿಲ್ಲ. ಆದರೆ ಈ ವ್ಯವಸ್ಥೆಯು, 'ಹೌದು, ನಾನು ಇಷ್ಟಿಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದೇನೆ' ಎಂದು ನೀವು ಅರ್ಥಮಾಡಿಕೊಳ್ಳುವಿರಿ. "
|