KN/690324 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಬ್ರಹ್ಮಾಂಡವು ಕೇವಲ ಒಂದು ಸಾಸಿವೆ ಬೀಜಗಳ ಚೀಲದಲ್ಲಿ, ಸಣ್ಣ ಸಾಸಿವೆ ಬೀಜದ ಹಾಗೆ ಎಂದು ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ನೀವು ಒಂದು ಚೀಲದಷ್ಟು ಸಾಸಿವೆಯನ್ನು ತೆಗೆದುಕೊಂಡರೆ, ಅದರಲ್ಲಿ ಎಷ್ಟು ಇವೆ ಎಂದು ಎಣಿಸಲು ಸಾಧ್ಯವಿಲ್ಲ. ಸಾಧ್ಯವೇ? ನೀವು ಧಾನ್ಯಗಳ ಚೀಲವೊಂದನ್ನು ತೆಗೆದುಕೊಂಡರೆ , ಅದರಲ್ಲಿ ಎಷ್ಟು ಧಾನ್ಯಗಳಿವೆ ಎಂದು ಎಣಿಸಲು ಸಾಧ್ಯವೇ? ಚೈತನ್ಯ ಮಹಾಪ್ರಭುಗಳು ಈ ವಿಶ್ವವನ್ನು ಹೀಗೆ ಹೋಲಿಸಿದ್ದಾರೆ .... ಅವರ ಭಕ್ತರಲ್ಲಿ ಒಬ್ಬರಾದ ವಾಸುದೇವ ದತ್ತ ... ಅದು ಭಕ್ತರ ಮನೋಭಾವ, ಅವರು ಚೈತನ್ಯ ಮಹಾಪ್ರಭುಗಳನ್ನು ವಿನಂತಿಸಿಕೊಂಡರು, 'ನನ್ನ ಪ್ರೀತಿಯ ಸ್ವಾಮಿಯೇ, ಪತಿತ ಆತ್ಮಗಳನ್ನು ಉದ್ಧರಿಸಲು ನೀವು ದಯೆಯಿಂದ ಬಂದಿದ್ದೀರಿ. ದಯವಿಟ್ಟು ನಿಮ್ಮ ಧ್ಯೇಯವನ್ನು ಪೂರೈಸಿರಿ. ಬ್ರಹ್ಮಾಂಡದ ಎಲ್ಲಾ ಆತ್ಮಗಳನ್ನು, ಭದ್ಧ ಆತ್ಮಗಳನ್ನು ಕರೆದೊಯ್ಯಿರಿ. ಅವರನ್ನು ಬಿಟ್ಟು ಹೋಗಬೇಡಿ, ಒಬ್ಬರನ್ನೂ ಕೂಡ ಬಿಡಬೇಡಿ. ದಯವಿಟ್ಟು ಅವರನ್ನು ಕರೆದೊಯ್ಯಿರಿ. ಮತ್ತು ಅವರು ಅರ್ಹರಲ್ಲ ಅಥವಾ ಅವರಲ್ಲಿ ಕೆಲವರು ಅರ್ಹರಲ್ಲ ಎಂದು ನೀವು ಭಾವಿಸಿದರೆ, ದಯವಿಟ್ಟು ಅವರ ಪಾಪ ಕರ್ಮಗಳನ್ನು ನನಗೆ ವರ್ಗಾಯಿಸಿ. ನಾನು ಬಳಲುತ್ತಾ ಇರುತ್ತೇನೆ. ಆದರೆ ನೀವು ಅವರೆಲ್ಲರನ್ನು ಕರೆದೊಯ್ಯಿರಿ'. ಭಕ್ತನ ಮನೋಭಾವವವು ಹೇಗಿದೆ ನೋಡಿ. "
690324 - ಉಪನ್ಯಾಸ ಶ್ರೀ.ಭಾ. ೦೭.೦೯.೧೧-೧೩ - ಹವಾಯಿ