"ನೀವು ದೇವರನ್ನು ನೋಡಲು ಸಾಧ್ಯವಿಲ್ಲ, ನೀವು ದೇವರನ್ನು ಆಘ್ರಾಣಿಸಲು ಸಾಧ್ಯವಿಲ್ಲ, ದೇವರನ್ನು ಸ್ಪರ್ಶಿಸಲು ಸಾಧ್ಯವಿಲ್ಲ, ದೇವರನ್ನು ಸವಿಯಲು ಸಾಧ್ಯವಿಲ್ಲ - ಆದರೆ ನೀವು ಕೇಳಬಹುದು. ಅದೊಂದು ವಾಸ್ತವ. ನೀವು ಕೇಳಬಹುದು. ಆದ್ದರಿಂದ ದೇವರು ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಶ್ರವಣೆಯು ಬಹಳ ಮುಖ್ಯವಾದ ವಿಷಯವಾಗಿದೆ. ಆದುದರಿಂದ ನಮ್ಮ, ಈ ಕೃಷ್ಣ ಪ್ರಜ್ಞೆ ಚಳುವಳಿಯು ಶ್ರವಣ ಪ್ರಕ್ರಿಯೆ. ಶ್ರವಣ ಪ್ರಕ್ರಿಯೆ. ನಾವು ಹೇಗೆ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ , ಹರೇ ಹರೇ ಎಂದು ಜಪಿಸುತ್ತೇವೆಯೋ. ನಾವು ಕೃಷ್ಣನ ಹೆಸರನ್ನು ಕೇಳುತ್ತಿದ್ದೇವೆ. ಕೇಳುವ ಮೂಲಕ ನಾವು ಕೃಷ್ಣನ ರೂಪ ಏನು ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ. ನಾವು ಯಾವುದನ್ನು ಇಲ್ಲಿ ಪೂಜಿಸುತ್ತಿರುವೆವೋ ಆ ಕೃಷ್ಣನ ರೂಪವು ಶ್ರವಣ ಮಾತ್ರದಿಂದಲೇ ಆಗಿದೆ. ಇದು ಕಲ್ಪನೆಯಲ್ಲ. "
|