KN/690410 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇಂದು ನಾನು ಅಮೇರಿಕನ್ ಅಥವಾ ಭಾರತೀಯ, ನಾಳೆ ಅಥವಾ ಮುಂದಿನ ಜನ್ಮ, ನನಗೆ ಏನಾಗಲಿದೆ ಎಂದು ನನಗೆ ತಿಳಿದಿಲ್ಲ. ಆದರೆ ಈ ದೇಹದ ಅವಧಿಯು ಮುಗಿಯುತ್ತದೆ. ನಾನು ಇದೇ ದೇಹವನ್ನು ಎಂದಿಗೂ ಪಡೆಯುವುದಿಲ್ಲ. ನಾನು ಇನ್ನೊಂದು ದೇಹವನ್ನು ಪಡೆಯುತ್ತೇನೆ. ಬಹುಶಃ ಒಂದು ದೇವತೆಯ ದೇಹ ಅಥವಾ ಮರದ ದೇಹ ಅಥವಾ ಸಸ್ಯದ ದೇಹ ಅಥವಾ ಪ್ರಾಣಿಗಳ ದೇಹ - ನಾನು ಇನ್ನೊಂದು ದೇಹವನ್ನು ಪಡೆಯಲೇಬೇಕು. ಆದ್ದರಿಂದ ಜೀವಿಯು ಈ ರೀತಿಯಲ್ಲಿ ಅಲೆದಾಡುತ್ತಿದೆ, ವಾಸಾಂಸಿ ಜೀರ್ಣಾನಿ(ಭ. ಗೀತಾ ೨.೨೨ ). ನಾವು ನಮ್ಮ ಉಡುಪನ್ನು ಒಂದು ಉಡುಪಿನಿಂದ ಇನ್ನೊಂದಕ್ಕೆ ಬದಲಾಯಿಸಿದಂತೆಯೇ, ಅದೇ ರೀತಿ ನಾವು ಮಾಯೆಯ ಪ್ರಭಾವದಿಂದ ವಿಭಿನ್ನ ಸ್ಥಾನಗಳನ್ನು ಬದಲಾಯಿಸುತ್ತಿದ್ದೇವೆ. ಮಾಯೆಯು ನನ್ನನ್ನು ಒತ್ತಾಯಿಸುತ್ತಿದೆ. ಪ್ರಕೃತೇ ಕ್ರಿಯಮಾಣಾನಿ ಗುಣೈ ಕರ್ಮಾಣಿ (ಭ. ಗೀತಾ ೩.೨೭). ನಾನು ಏನನ್ನಾದರೂ ಅಪೇಕ್ಷಿಸಿದ ತಕ್ಷಣ, ತಕ್ಷಣ ನನ್ನ ದೇಹವು ರೂಪುಗೊಳ್ಳುತ್ತದೆ. ತಕ್ಷಣವೇ ಒಂದು ನಿರ್ದಿಷ್ಟ ರೀತಿಯ ದೇಹವು ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಮತ್ತು ನಾನು ಬದಲಾಗಲು ಪ್ರಬುದ್ಧನಾದ ಕೂಡಲೇ, ನನ್ನ ಮುಂದಿನ ದೇಹವು ನನ್ನ ಆಸೆಗೆ ಅನುಗುಣವಾಗಿ ಸಿಗುತ್ತದೆ. ಆದ್ದರಿಂದ ನಾವು ಯಾವಾಗಲೂ ಕೃಷ್ಣನನ್ನು ಬಯಸಬೇಕು . "
690410 - ಉಪನ್ಯಾಸ ಶ್ರೀ.ಭಾ. ೦೨.೦೧.೦೧-೪ - ನ್ಯೂ ಯಾರ್ಕ್