"ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿದಿರುವ ವ್ಯಕ್ತಿಯು ಆಧ್ಯಾತ್ಮಿಕ ದೇಹವನ್ನು ಹೊಂದಿರುವನೆಂದು ಪರಿಗಣಿಸಲಾಗಿದೆ. ಅದೇ ಉದಾಹರಣೆ, ಹೇಗೆ ನಾನು ಹಲವಾರು ಬಾರಿ ನೀಡಿರುವೆನೋ : ಕಬ್ಬಿಣದ ಕೋಲಿನಂತೆಯೇ. ನೀವು ಬೆಂಕಿಯಲ್ಲಿ ಇರಿಸಿ್ದರೆ , ಅದು ಬಿಸಿ, ಬಿಸಿಯಾಗಿರುತ್ತದೆ. ಅದು ಬೆಂಕಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಿದಷ್ಟು, ಅದು ಹೆಚ್ಚು ಹೆಚ್ಚು ಬಿಸಿ, ಬಿಸಿಯಾಗುತ್ತದೆ. ಮತ್ತು ಕೊನೆಗೆ ಅದು ಕೆಂಡದಂತೆ ಬಿಸಿಯಾಗುತ್ತದೆ, ಆ ಸಮಯದಲ್ಲಿ, ಆ ಕಬ್ಬಿಣವನ್ನು ಬೇರೆ ಯಾವುದಾದರೂ ಮುಟ್ಟಿದರೆ ಅದು ಸುಡುತ್ತದೆ. ಅದು ಕಬ್ಬಿಣದಂತೆ ಕಾರ್ಯನಿರ್ವಹಿಸುವುದಿಲ್ಲ; ಅದು ಬೆಂಕಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ, ಈ ಕೃಷ್ಣ ಪ್ರಜ್ಞೆಯಿಂದ, ನಿರಂತರ ಜಪದಿಂದ, ನೀವು ನಿಮ್ಮ ದೇಹವನ್ನು ಆಧ್ಯಾತ್ಮಿಕಗೊಳಿಸುತ್ತೀರಿ. ಆ ಸಮಯದಲ್ಲಿ, ನೀವು ಎಲ್ಲಿಗೆ ಹೋದರೂ, ನೀವು ಯಾರನ್ನು ಸ್ಪರ್ಶಿಸಿದರೂ ಅವನು ಆಧ್ಯಾತ್ಮಿಕನಾಗುತ್ತಾನೆ. ಅದೇ ರೀತಿ, ಕಬ್ಬಿಣ ... ಆಧ್ಯಾತ್ಮಿಕವಾಗದೆ, ಕೆಂಡದಂತೆ ಬಿಸಿಯಾಗದೆ, ನೀವು ಸ್ಪರ್ಶಿಸಿದರೆ , ಅದು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ, ಈ ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಬಂದವರು, ಭವಿಷ್ಯದಲ್ಲಿ ಬೋಧಿಸುವರು ಮತ್ತು ಭವಿಷ್ಯದಲ್ಲಿ ಆಧ್ಯಾತ್ಮಿಕ ಗುರುಗಳಾಗುವರೆಂದು ನಿರೀಕ್ಷೆಸಲಾಗಿದೆ. ಆದರೆ ಮೊದಲು ನೀವು ನಿಮ್ಮನ್ನು ಆಧ್ಯಾತ್ಮಿಕಗೊಳಿಸಬೇಕು; ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. "
|