“ನೀವು ಜನರನ್ನು ಕೃಷ್ಣ ಪ್ರಜ್ಞಾವಂತರನ್ನಾಗಿ ಮಾಡಿದರೆ, ಆಗ ಎಲ್ಲವೂ ತಂತಾನೆ ಸರಿಯಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವವಿದೆ. ಆದ್ದರಿಂದ ಅವರು ಒಬ್ಬ ಕೃಷ್ಣ ಪ್ರಜ್ಞಾವಂತನಿಗೆ ರಾಷ್ಟ್ರಪತಿ ಅಥವ ಪ್ರಧಾನಮಂತ್ರಿ ಆಗಲು ಮತ ನೀಡಿದರೆ, ಆಗ ಎಲ್ಲವು ಉಳಿಸಲಾಗುವುದು. ಆದ್ದರಿಂದ ನೀನು ಕೃಷ್ಣ ಪ್ರಜ್ಞಾವಂತ ಮತದಾರರನ್ನು ಸೃಷ್ಟಿಸಬೇಕು ಎಂದರ್ಥ. ಆಗ ಪ್ರತಿಯೊಂದೂ ಸರಿಯಾಗುತ್ತದೆ. ಅದು ನಿಮ್ಮ ಗುರಿಯಾಗಿರಬೇಕು, ಕೃಷ್ಣ ಪ್ರಜ್ಞೆ ಅಂದೋಲನ. ಸರ್ಕಾರವು ಇನ್ನು ಸಾರ್ವಜನಿಕರ ನಿಯಂತ್ರಣದಲ್ಲಿದೆ. ಅದು ನಿಜ. ಸಾರ್ವಜನಿಕರು ಕೃಷ್ಣ ಪ್ರಜ್ಞಾವಂತರಾದರೆ, ಸರ್ಕಾರವು ಕೂಡ ಕೃಷ್ಣ ಪ್ರಜ್ಞಾವಂತ ಆಗುವುದು ಸಹಜ. ಅದು ಸಾರ್ವಜನಿಕರಿಗೆ ಬಿಟ್ಟದು. ಆದರೆ ಅವರಿಗೆ ಅದು ಬೇಡ.”
|