KN/710103 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸೂರತ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ನಾಲ್ಕು ಬಗೆಯ ಜನರು ವಿಷ್ಣುವನ್ನು ಪೂಜಿಸುತ್ತಾರೆ: ಆರ್ತ, ಸಂಕಟದಲ್ಲಿರುವವರು; ಅರ್ಥಾರ್ಥಿ, ಹಣ ಅಥವ ಭೌತಿಕ ಲಾಭ ಯಾಚಿಸುವವರು; ಜಿಜ್ಞಾಸು, ತಿಳಿಯುವ ಕುತೂಹಲವುಳ್ಳವರು; ಹಾಗು ಜ್ಞಾನಿ – ಈ ನಾಲ್ಕು ಬಗೆಯವರು. ಇವರಲ್ಲಿ, ಆರ್ತ ಹಾಗು ಅರ್ಥಾರ್ಥಿ, ಸಂಕಟದಲ್ಲಿರುವವರು ಹಾಗು ಹಣದ ಅವಶ್ಯಕತೆಯಿರುವವರಿಗಿಂತ, ಜಿಜ್ಞಾಸು ಹಾಗು ಜ್ಞಾನಿ ಉತ್ತಮರು. ಜಿಜ್ಞಾಸು ಹಾಗು ಜ್ಞಾನಿ ಕೂಡ ಪರಿಶುದ್ದ ಭಕ್ತಿಸೇವೆಯಲ್ಲಿ ತೊಡಗಿಲ್ಲ ಏಕೆಂದರೆ ಪರಿಶುದ್ದ ಭಕ್ತಿಸೇವೆ ಜ್ಞಾನಕ್ಕು ಅತೀತವಾದದ್ದು. ಜ್ಞಾನ-ಕರ್ಮಾದಿ-ಅನಾವೃತಮ್ (ಚೈ. ಚ ಮದ್ಯ 19.167). ಗೋಪಿಯರ ಹಾಗೆ – ಅವರು ಕೃಷ್ಣನು ಭಗವಂತನೋ ಇಲ್ಲವೋ ಎಂದು ಜ್ಞಾನದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಇಲ್ಲ. ಅವರು ತಂತಾನೆ – ತಂತಾನೆ ಅಲ್ಲ, ಅವರ ಪೂರ್ವ ಪುಣ್ಯ ಕರ್ಮಗಳಿಂದ – ಕೃಷ್ಣನಲ್ಲಿ ತೀವ್ರ ಪ್ರೇಮವನ್ನು ಬೆಳೆಸಿಕೊಂಡರು. ಅವರು ಕೃಷ್ಣನು ಭಗವಂತನೋ ಇಲ್ಲವೋ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅವರಿಗೆ ಉದ್ದವ ಬೋಧಿಸಲು ಪ್ರಯತ್ನಿಸಿದಾಗ ಅವರು ಗಮನದಿಂದ ಆಲಿಸಲಿಲ್ಲ. ಅವರು ಕೃಷ್ಣನ ನೆನಪಿನಲ್ಲಿ ತನ್ಮಯರಾಗಿದ್ದರು. ಕೃಷ್ಣ ಪ್ರಜ್ಞೆಯ ಪರಿಪೂರ್ಣತೆಯು ಇದು."
710103 - ಉಪನ್ಯಾಸ SB 06.01.56-62 - ಸೂರತ್