"ನೀವು ಪರಂ ಬ್ರಹ್ಮ.” ನಮ್ಮಲ್ಲಿ ಪ್ರತಿಯೊಬ್ಬರೂ ಕೃಷ್ಣನ ಭಾಗಾಂಶವಾಗಿರುವುದರಿಂದ ನಾವೂ ಬ್ರಹ್ಮ. ಒಳ್ಳೆಯದು. ಆದರೆ ನಾವು ಪರಬ್ರಹ್ಮ ಅಲ್ಲ. ಪರಂ ಬ್ರಹ್ಮ ಅಂದರೆ ಕೃಷ್ಣ. ನಮ್ಮಲ್ಲಿ ಪ್ರತಿಯೊಬ್ಬರೂ ಈಶ್ವರರು. ಈಶ್ವರ ಎಂದರೆ ನಿಯಂತ್ರಕ. ಇಂದು ರಾತ್ರಿ ಇಲ್ಲಿ, ನಿಮ್ಮಲ್ಲಿ ಕೆಲವರು ಮ್ಯಾಜಿಸ್ಟ್ರೇಟುಗಳು, ನ್ಯಾಯಾಧೀಶರು ಬಂದಿದಿರಿ. ನೀವೂ ನಿಯಂತ್ರಕರು; ಆದರೆ ನೀವು ಪರಮ ನಿಯಂತ್ರಕರಲ್ಲ. ಈ ರೀತಿ, ಪರಮ ನಿಯಂತ್ರಕ ಯಾರು ಎಂದು ಕಂಡುಹಿಡಿಯಿರಿ. ಯಾರು ಇತರರ ಆದೇಶವನ್ನು ಪಾಲಿಸಲು ಬದ್ಧನಲ್ಲವೋ ಅವನೇ ಪರಮ ನಿಯಂತ್ರಕ. ಅವನು ಸರ್ವೋಚ್ಚ ನಿಯಂತ್ರಕ. ಇಲ್ಲದಿದ್ದರೆ, ಪ್ರತಿವೊಬ್ಬನೂ ನಿಯಂತ್ರಕನಾಗಿರಬಹುದು, ಆದರೆ ಅವನು ಹಿರಿಯರ ಆದೇಶಗಳನ್ನು ಪಾಲಿಸಬೇಕಾಗುತ್ತದೆ.”
|