KN/730212 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಡ್ನಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಕೃಷ್ಣನಿಗೆ ಸೇವೆ ಸಲ್ಲಿಸಿದರೆ, ಆಗ ನಾವು ಪ್ರತಿಬಿಂಬವಾಗುತ್ತೇವೆ. ನಾವು ಪ್ರತಿಬಿಂಬವು. ಕೃಷ್ಣ ತೃಪ್ತನಾದರೆ, ತಕ್ಷಣ ನಾವು ತೃಪ್ತರಾಗುತ್ತೇವೆ. ಆದ್ದರಿಂದ ನೀವು ಶಾಂತಿ, ತೃಪ್ತಿಯನ್ನು ಬಯಸಿದರೆ, ನೀವು ಕೃಷ್ಣನನ್ನು ತೃಪ್ತಿಪಡಿಸಬೇಕು. ಅದೇ ಸರಿಯಾದ ರೀತಿ. ನಿಮಗೆ ಸಾಧ್ಯವಿಲ್ಲ… ಕನ್ನಡಿಯಲ್ಲಿನ ಪ್ರತಿಬಿಂಬವನ್ನು ಅಲಂಕರಿಸುವಂತೆ - ಅದು ಸಾಧ್ಯವಿಲ್ಲ. ನೀವು ನಿಜ ವ್ಯಕ್ತಿಯನ್ನು ಅಲಂಕರಿಸಿ, ಆಗ ಕನ್ನಡಿಯಲ್ಲಿನ ಪ್ರತಿಬಿಂಬವು ಅಲಂಕರಿಸಲಾಗುವುದು. ಇದು ಪ್ರಕ್ರಿಯೆ. ಕೃಷ್ಣ ನಿಮ್ಮ ಅಲಂಕಾರ, ನಿಮ್ಮ ಉತ್ತಮ ಆಹಾರ ಪದಾರ್ಥಗಳಿಗೆ ಹಂಬಲಿಸುವುದಿಲ್ಲ, ಏಕೆಂದರೆ ಅವನು ಪರಿಪೂರ್ಣ, ಆತ್ಮಾರಾಮ. ಅವನು ಯಾವುದೇ ರೀತಿಯ ಸೌಕರ್ಯಗಳನ್ನು ಸೃಷ್ಟಿಸಬಲ್ಲನು, ಅವನು ತುಂಬಾ ಶಕ್ತಿಶಾಲಿ. ಆದರೆ ಅವನು ತುಂಬಾ ಕರುಣಾಮಯಿ, ಆತನನ್ನು ಸೇವಿಸಬಲ್ಲ ರೂಪದಲ್ಲಿ ಅವನು ನಿಮ್ಮ ಬಳಿಗೆ ಬರುತ್ತಾನೆ: ಈ ಅರ್ಚಾ-ಮೂರ್ತಿಯಾಗಿ. ಕೃಷ್ಣ ತುಂಬಾ ಕರುಣಾಮಯಿ. ನಿಮಗೆ ಪ್ರಸ್ತುತ ಕ್ಷಣದಲ್ಲಿ ಕೃಷ್ಣನನ್ನು ಆಧ್ಯಾತ್ಮಿಕ ರೂಪದಲ್ಲಿ ನೋಡಲಾಗುವುದಿಲ್ಲವೆಂದು, ನಿಮ್ಮ ಮುಂದೆ ಕಲ್ಲಿನಂತೆ, ಮರದಂತೆ ಬರುತ್ತಾನೆ. ಆದರೆ ಅವನು ಕಲ್ಲು ಅಲ್ಲ; ಅವನು ಮರವೂ ಅಲ್ಲ."
730212 - ಉಪನ್ಯಾಸ Arrival - ಸಿಡ್ನಿ