KN/730216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಡ್ನಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
1966ರಲ್ಲಿ, ನಾನು ಅಮೇರಿಕದಲ್ಲಿದ್ದಾಗ, ಒಬ್ಬ ಅಮೇರಿಕನ್ ಹೆಣ್ಣು ತಾನು ಓದುವುದಕ್ಕೆ ಭಗವದ್ಗೀತೆಯ ಆಂಗ್ಲ ಭಾಷ ಆವೃತಿಯನ್ನು ಸೂಚಿಸಿಯೆಂದು ನನ್ನನ್ನು ಕೇಳಿದಳು. ಆದರೆ ಪ್ರಾಮಾಣಿಕವಾಗಿ ನಾನು ಯಾವೊಂದನ್ನೂ ಶಿಫಾರಸು ಮಾಡಲು ಸಾಧ್ಯವಾಗಲಿಲ್ಲ,… ಅವುಗಳ ಭ್ರಾಂತಿಯುತ ವಿವರಣೆಯ ಕಾರಣದಿಂದ. ಅದು ನನಗೆ ಭಗವದ್ಗೀತಾ ಯಥಾರೂಪವನ್ನು ರಚಿಸಲು ಉತ್ತೇಜನ ನೀಡಿತು. ಹಾಗು ಭಗವದ್ಗೀತಾ ಯಥಾರೂಪದ ಈ ಪ್ರಸ್ತುತ ಆವೃತ್ತಿಯನ್ನು ಜಗತ್ತಿನ ಅತಿ ದೊಡ್ಡ ಪ್ರಕಾಶಕರಾದಂತಹ ಮಾಕ್ಮಿಲನ್ ಸಂಸ್ಥೆ ಪ್ರಕಟಿಸುತ್ತಿದೆ. ಮತ್ತು ನಾವು ಬಹಳ ಚೆನ್ನಾಗಿ ನಡೆಸುತ್ತಿದ್ದೇವೆ. 1968ರಲ್ಲಿ, ನಾವು ಭಗವದ್ಗೀತಾ ಯಥಾರೂಪದ ಸಂಕ್ಷಿಪ್ತ ಆವೃತ್ತಿಯನು ಪ್ರಕಟಿಸಿದ್ದೆವು. ಅದು ಅದ್ಭುತವಾಗಿ ಮಾರಾಟವಾಯಿತು! ಮಾಕ್ಮಿಲನ್ ಸಂಸ್ಥೆಯ ವಹಿವಾಟು ನಿರ್ವಾಹಕರು ನಮ್ಮ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಮಾರಾಟವಾಗುತ್ತಿದೆ, ಇತರ ಪುಸ್ತಕಗಳು ಕಡಿಮೆಯಾಗುತ್ತಿದೆಯೆಂದು ವರದಿ ನೀಡಿದರು. ನಂತರ ಇತ್ತೀಚೆಗೆ, 1972ರಲ್ಲಿ, ನಾವು ಭಗವದ್ಗೀತಾ ಯಥಾರೂಪದ ಈ ಪೂರ್ಣ ಆವೃತ್ತಿಯನ್ನು ಪ್ರಕಟಿಸಿದೆವು.
730216 - ಉಪನ್ಯಾಸ BG 07.01 - ಸಿಡ್ನಿ