ಜನ್ಮೈಶ್ವರ್ಯ ಶ್ರುತ-ಶ್ರೀಭಿರ್ ಏಧಮಾನ-ಮದಃ ಪುಮಾನ್ ( ಶ್ರೀ.ಭಾ 1.8.26). ದುರದೃಷ್ಟವಶಾತ್… ಇಂತ ಅವಕಾಶಗಳು ಸಿಕ್ಕಾಗ – ಒಳ್ಳೆ ಕುಟುಂಬ ಅಥವ ಒಳ್ಳೆ, ಸುಂದರ ಶರೀರ, ವಿದ್ಯಾಭ್ಯಾಸ - ಅದನ್ನು ನಮ್ಮ ಹಿಂದಿನ ಧರ್ಮ ಕಾರ್ಯಗಳಿಂದಾಗಿ ಎಂದು ನಾವು ಪರಿಗಣಿಸಬೇಕು; ಆದ್ದರಿಂದ ಅವುಗಳನ್ನು ಕೃಷ್ಣನಿಗಾಗಿ ಬಳಸಿಕೊಳ್ಳಬೇಕು. ಏಕೆಂದರೆ ಧಾರ್ಮಿಕ ಚಟುವಟಿಕೆಗಳೆಂದರೆ ಕೃಷ್ಣನನ್ನು ಸಮೀಪಿಸುವುದು ಎಂದರ್ಥ. ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೆ ನರಾಧಮಾಃ ( ಭ.ಗೀ 7.15). ನರಾಧಮಾಃ, ಯಾರು ಮಾನವಕುಲದ ಅತ್ಯಂತ ಕೆಳಮಟ್ಟದವರೋ, ಸದಾ ಪಾಪ ಕಾರ್ಯಾಗಳಲ್ಲಿ ತೊಡಗಿರುವವರೋ, ದೂರ್ತರು – ಅತಿ ವಿದ್ಯಾವಂತರು – ಮಾಯಯಾ ಅಪಹೃತ-ಜ್ಞಾನಾಃ, ಅವರ ಶೈಕ್ಷಣಿಕ ಮೌಲ್ಯವನ್ನು ಮಾಯೆ ಕಿತ್ತುಕೊಳ್ಳುತ್ತದೆ.
|