KN/740319 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ, ಅಪಶ್ಯತಾಮ್ ಆತ್ಮಾ-ತತ್ವಮ್ (ಶ್ರೀ.ಭಾ 2.1.2), ಆತ್ಮ ಸತ್ಯವನ್ನು ಅರಿಯಲು ಬುದ್ಧಿ ಇಲ್ಲದವರು, ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಹೇಗೆ ಸಿಕ್ಕಿಹಾಕಿಕೊಂಡಿದ್ದಾರೆ? ದೇಹ-ಅಪತ್ಯ, ಈ ದೇಹ ಮತ್ತು ಸಂತತಿ, ಮಕ್ಕಳು, ಈ ದೇಹದಿಂದ ಪತ್ನಿಯ ಮೂಲಕ ಜನಿಸಿದವರು, ದೇಹಪತ್ಯ-ಕಲತ್ರಾದಿಷು, ಆತ್ಮ ಸೈನ್ಯೇಷು (ಶ್ರೀ.ಭಾ 2.1.4). ಎಲ್ಲರೂ ಯೋಚಿಸುತ್ತಿದ್ದಾರೆ, 'ನಾನು ಒಳ್ಳೆಯ ಹೆಂಡತಿಯನ್ನು ಪಡೆದಿದ್ದೇನೆ. ನನಗೆ ತುಂಬಾ ಒಳ್ಳೆಯ ಮಕ್ಕಳಿದ್ದಾರೆ. ಉತ್ತಮ ಸಮಾಜ, ರಾಷ್ಟ್ರ ಮತ್ತು ಮುಂತಾದವುಗಳನ್ನು ನಾನು ಪಡೆದುಕೊಂಡಿದ್ದೇನೆ. ದೇಹಾಪತ್ಯ-ಕಲತ್ರಾದಿಷು. ಮತ್ತು 'ಅವರು ನನ್ನ ಸೈನಿಕರು, ಇಲ್ಲಿ ಈ ಹೋರಾಟ, ಅಸ್ತಿತ್ವಕ್ಕಾಗಿ ಹೋರಾಟ', ಎಂದು ಅವನು ಯೋಚಿಸುತ್ತಿದ್ದಾನೆ. ಎಲ್ಲರೂ ಅಸ್ತಿತ್ವದಲ್ಲಿರಲು ಹೆಣಗಾಡುತ್ತಿದ್ದಾರೆ, ಮತ್ತು ಎಲ್ಲರೂ ಯೋಚಿಸುತ್ತಿದ್ದಾರೆ, 'ಅವರು ನನ್ನ ಸೈನಿಕರು. ನನ್ನ ಹೆಂಡತಿ, ಮಕ್ಕಳು, ಸಮಾಜ, ಸ್ನೇಹ, ರಾಷ್ಟ್ರ, ಅವರು ನನಗೆ ರಕ್ಷಣೆ ನೀಡುತ್ತಾರೆ '. ಆದರೆ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಇಲ್ಲಿ ಪ್ರಮತ್ತಃ, ಪಾಗಲಾ ಎಂದು ವಿವರಿಸಲಾಗಿದೆ. ನಿಮಗೆ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ."
740319 - ಉಪನ್ಯಾಸ SB 02.01.04 - ವೃಂದಾವನ