KN/760204 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ | 
| "ನಾನು ಮೂಢ, ಆದ್ದರಿಂದ ನಾನು ಕಲಿಯಬೇಕು", ಎಂದು ಮನುಷ್ಯ ಅರ್ಥಮಾಡಿಕೊಳ್ಳಬೇಕು. ಮತ್ತು ವೇದಗಳು ʼಗುರುಗಳ ಬಳಿಗೆ ಹೋಗು' ಎಂದು ಹೇಳುತ್ತದೆ. ʼತದ್ ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್ (ಮ.ಉ 1.2.12). ನೀನು ಕಲಿಯಲು ಬಯಸಿದರೆ ಗುರುವಿನ ಬಳಿಗೆ ಹೋಗು.ʼ ಆದರೆ ಅವನು ಮೂಢನಾಗಿ ಊಹಾಪೋಹದಲ್ಲಿ ನಿರತನಾಗಿದ್ದರೆ, ಮೂಢನಾಗಿಯೇ ಉಳಿಯುತ್ತಾನೆ. ಅವನಿಗೆಂದೂ ಜ್ಞಾನೋದಯವಾಗುವುದಿಲ್ಲ. ಅವನು ನಿರಂತರವಾಗಿ ಹಾಗೆಯೇ ಉಳಿಯುತ್ತಾನೆ... ಮೂಢಾ ಜನ್ಮನಿ ಜನ್ಮನಿ ಮಾಮ್ ಅಪ್ರಾಪ್ಯೈವ (ಬಿಜಿ 16.20). ಅವನು ಭಗವಂತನನ್ನು ಪಡೆಯಲು ಸಾಧ್ಯವಿಲ್ಲ. ಜನ್ಮ ಜನ್ಮಾಂತರಗಳಾದರು ಅವನು ಹಾಗೆಯೇ ಉಳಿಯುತ್ತಾನೆ, ಮೂಢ." | 
| 760204 - ಮುಂಜಾನೆಯ ವಾಯು ವಿಹಾರ - ಮಾಯಾಪುರ್ | 




