KN/760205 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾವ ಆದೇಶವಿದೆಯೋ, ನೀವು ಅದನ್ನು ಪಾಲಿಸಿ. ಔಷಧಿಯನ್ನು ಕೊಡುವಾಗ, ವೈದ್ಯರು ನೀವು ಇಷ್ಟು ಹನಿಗಳನ್ನು ತೆಗೆದುಕೊಳ್ಳಬಹುದು' ಎಂದು ಆದೇಶ ನೀಡುತ್ತಾರೆ. ಆದರೆ ನೀವು ʼಓಹ್, ಒಳ್ಳೆಯ ಔಷಧಿ, ಇಡೀ ಔಷದಿಯನ್ನು ಈಗಲೇ ತಿಂದರೆ ತಕ್ಷಣ ಗುಣಮುಖನಾಗಬಹುದು' ಎಂದರೆ, ಅಷ್ಟೇ. ಸಾಯುತ್ತೀರಿ. ನೀವು ತೆಗೆದುಕೊಳ್ಳಬೇಕು, ಆನಂದಿಸಬೇಕು - ಆದರೆ ಆದೇಶದ ಪ್ರಕಾರ. ʼನೀವು ಆನಂದಿಸಬೇಡಿ', ಎಂದು ಭಗವಂತ ಹೇಳುವುದಿಲ್ಲ. ನೀವು, ʼಆನಂದಮಯೋ ಅಭ್ಯಾಸಾತ್ʼ (ವೇದಾಂತ-ಸೂತ್ರ 1.1.12). ಜೀವಾತ್ಮ ಎಂದರೆ ಆನಂದಮಯ, ಸಂತೋಷ. ಆದರೆ ಆ ಆನಂದ, ಅದು ಎಲ್ಲಿ ಶಾಶ್ವತವಾಗಿದೆ, ನಾವು ಆ ಶಾಶ್ವತ ಆನಂದವನ್ನು ಹೇಗೆ ತಲುಪಬಹುದು, ಅದನ್ನು ಕಲಿಸಲಾಗುತ್ತಿದೆ. ಇಲ್ಲದಿದ್ದರೆ, ಓ ಮೂರ್ಖರೇ, ನೀವು ಇಡೀ ಔಷಧಿಯನ್ನು ತಿಂದು ಸಾಯುತ್ತೀರಿ. ಅಷ್ಟೇ."
760205 - ಮುಂಜಾನೆಯ ವಾಯು ವಿಹಾರ - ಮಾಯಾಪುರ್