"ಕೃಷ್ಣನಿಗೆ ನಮ್ಮ ಸೇವೆಯ ಅಗತ್ಯವಿಲ್ಲ, ಆದರೆ ನಾವು ಕೃಷ್ಣನಿಗೆ ಸ್ವಲ್ಪ ಸೇವೆಯನ್ನು ನೀಡಿದರೆ ಅದು ನಮ್ಮಗೆ ಶ್ರೇಯಸ್ಕರ. ಇದುವೇ ಸೂತ್ರ. ಕೃಷ್ಣ ನಮಗೆ ಆಭಾರಿ ಎಂದು ಭಾವಿಸಬೇಡಿ. ಆದರೆ ಅವನು ಆಭಾರಿ ಅಂದುಕೊಳ್ಳುತ್ತಾನೆ. ಏಕೆ? ಅವಿದುಷಃ. ನಾವೆಲ್ಲರೂ ಮೂರ್ಖರು ಮತ್ತು ಧೂರ್ತರು. ನಾವು ಸೇವೆಯನ್ನು ಮಾಡುತ್ತಿದ್ದೇವೆ ಅಂದುಕೊಳ್ಳುತ್ತಿದ್ದೇವೆ. ಇಲ್ಲ. ನಾವು ಯಾವುದನ್ನೂ ನೀಡಲು ಸಾಧ್ಯವಿಲ್ಲ. ನಮಗೆ ಏನೂ ಕೊಡಲು ಸಾಧ್ಯವಾಗದಷ್ಟು ಅತ್ಯಲ್ಪ. ಅವನು ಅಪರಿಮಿತನು, ಮತ್ತು ನಾವು ತುಂಬಾ ಸೀಮಿತ, ಅತಿಸಣ್ಣವರು. ಆದರೂ ಸಣ್ಣ ಮಗು ಏನಾದರು ತಂದೆಗೆ ಕೊಟ್ಟರೆ... ಅದು ತಂದೆಯ ಆಸ್ತಿ, ಆದರೂ, 'ನನ್ನ ಮಗು ನನಗೆ ಒಂದು ಮಿಠಾಯಿ ಕೊಡುತ್ತಿದೆ', ಎಂದು ತಂದೆ ತುಂಬಾ ಸಂತೋಷಪಡುತ್ತಾನೆ. ʼಇದು ನನ್ನಗೆ ದೊಡ್ಡ ಆಸ್ತಿ', (ನಗು) ಎಂದು ಅವನು ಭಾವಿಸುತ್ತಾನೆ.”
|