KN/760421 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಲ್ಬರ್ನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ವೈದಿಕ ತತ್ವವೆಂದರೆ... ಜನರು... ಎಲ್ಲರೂ ಅಜ್ಞಾನದಲ್ಲಿದ್ದಾರೆ, ಏಕೆಂದರೆ ಜೀವವಿಕಾಸ ಕೆಳ ಜಾತಿಯ ಜೀವಿಗಳಿಂದ ಶುರುವಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಡಾರ್ವಿನ್‌ನ ಜೀವವಿಕಾಸದ ಸಿದ್ಧಾಂತವು ಬಹಳ ಮಹತ್ವ ಹೊಂದಿದ್ದು, ʼಮಂಗನಿಂದ ಮಾನವʼ ಎಂಬುವ ತತ್ವವನ್ನು ಅವರು ನಂಬುತ್ತಾರೆ. ಸಹಜವಾಗಿ, ವೈದಿಕ ಶಾಸ್ತ್ರವು ಮನುಷ್ಯನ ಜನನವು ಮೂರು ಮೂಲಗಳಿಂದ ಆಗುತ್ತದೆ ಎಂದು ಹೇಳುತ್ತದೆ: ಒಂದು ಹಸುವಿನಿಂದ, ಇನ್ನೊಂದು ಸಿಂಹದಿಂದ, ಮತ್ತು ಇನ್ನೊಂದು ಕೋತಿಯಿಂದ. 'ಮಂಗ' ಎಂಬ ಪದವಿದೆ. ಸತ್ವ-ಗುಣದವರ ಪೂರ್ವ ಜನ್ಮ ಹಸುವಾಗಿದ್ದು, ರಾಜೋ-ಗುಣದವರ ಪೂರ್ವ ಜನ್ಮ ಸಿಂಹವಾಗಿದ್ದು, ತಮೋ ಗುಣದವರ ಪೂರ್ವ ಜನ್ಮ ಕೋತಿ ಆಗಿರುತ್ತದೆ.”
760421 - ಉಪನ್ಯಾಸ BG 09.03 - ಮೆಲ್ಬರ್ನ್