"ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಎಂದಾದರೂ ಒಂದು ದಿನ ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳಲ್ಲು ನಾವು ನಿಮಗೆ ಕೃಷ್ಣ ಪ್ರಸಾದ ತಿನ್ನುವ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ವಾಸ್ತವವಾಗಿ, ಅದೇ ನಮ್ಮ ನೀತಿ. ನಾವು ಬಡವರಿಗೆ ಆಹಾರ ನೀಡುತ್ತಿಲ್ಲ. ವಿವೇಕಾನಂದರ ದರಿದ್ರ-ನಾರಾಯಣ-ಸೇವೆಯಂತಹ ತತ್ತ್ವವಲ್ಲ ನಮ್ಮದು. ಇಲ್ಲ, ಅದು ನಮ್ಮ ಗುರಿಯಲ್ಲ. ನಾವು ನಿಮಗೆ ಪ್ರಸಾದವನ್ನು ನೀಡುತ್ತಿದ್ದೇವೆ. ವಾಸ್ತವವಾಗಿ, ಕೃಷ್ಣ ಪ್ರಸಾದವನ್ನು ತಿನ್ನುತ್ತ, ತಿನ್ನುತ್ತ, ತಿನ್ನುತ್ತ, ನೀವು ಒಂದು ದಿನ ಕೃಷ್ಣ ಪ್ರಜ್ಞಾವಂತರಾಗುತ್ತೀರಿ. ನೀವು ತುಂಬಾ ಮಂದವಾಗಿರುವುದರಿಂದ, ನಿಮಗೆ ತತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಾಣಿಗಳಂತೆ ಹೊಟ್ಟೆ ತುಂಬಿಸಿಕೊಳ್ಳುವುದೆ ನಿಮಗೆ ತಿಳಿದಿರುವುದು. ಆದ್ದರಿಂದ, ನಾವು ಆ ಸೌಲಭ್ಯವನ್ನು ನೀಡುತ್ತಿದ್ದೇವೆ, 'ಸರಿ, ನಿಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಿ. ನೀವು ಸೋಂಕಿತರಾಗುವಿರಿ. ಸೋಂಕು ಪ್ರದೇಶದಲ್ಲಿರುವ ಆಹಾರ ಪದಾರ್ಥಗಳನ್ನು ತಿಂದರೆ, ನೀವು ಕೆಲವು ಕಾಯಿಲೆಗೆ ತುತ್ತಾಗುತ್ತೀರಿ. ಹಾಗೆಯೆ, ಇದು ಕೃಷ್ಣ-ಸೋಂಕಿತ ಪ್ರಸಾದ. ನೀವು ಇದನ್ನು ತಿಂದರೆ ಒಂದು ದಿನ ನೀವೂ ಕೂಡ ಕೃಷ್ಣ ಪ್ರಜ್ಞೆ ಎಂಬ ರೋಗಕ್ಕೆ ಒಳಗಾಗುತ್ತೀರಿ. ಇದು ಸತ್ಯ. ಹೇಗಾದರೂ ಸರಿ, ಅವನು ಕೃಷ್ಣನ ಸಂಪರ್ಕಕ್ಕೆ ಬರಲಿ. ಅವನಿಗೆ ಮಂಗಳವಾಗುತ್ತದೆ."
|