"ಒಂದು ತುಂಬಾ ಸುಂದರವಾದ ಹೂವನ್ನು ಚಿತ್ರಿಸಲು ನೀವು ಎಷ್ಟು ಶ್ರಮ ಪಡಬೇಕು. ಆದರೂ, ಅದು ನೈಸರ್ಗಿಕ ಹೂವಿನಷ್ಟು ಸುಂದರವಾಗಿರಲು ಸಾಧ್ಯವಿಲ್ಲ. ಆದರೆ ನೈಸರ್ಗಿಕ ಹೂವು ಆಕಸ್ಮಿಕವಾಗಿ ಬಂದಿದೆ ಎಂದು ಭಾವಿಸಬೇಡಿ. ಇಲ್ಲ. ಇದನ್ನು ಕೃಷ್ಣನು ನಿರ್ವಹಿಸುವ ಯಂತ್ರದಿಂದ ಮಾಡಲಾಗಿದೆ. ಅದೇ ಕೃಷ್ಣ ಪ್ರಜ್ಞೆ. ಪರಸ್ಯ ಶಕ್ತಿರ್ ವಿವಿಧೈವ ಶ್ರೂಯತೇ (ಶ್ವೇತಾಶ್ವತರ ಉಪನಿಷದ್ 6.8) ಎಂದು ಇದನ್ನು ಶಾಸ್ತ್ರದಲ್ಲಿ ದೃಡೀಕರಿಸಲ್ಪಟ್ಟಿದೆ. ಪರ, ಸರ್ವೋಚ್ಚ, ಅವನ ಶಕ್ತಿಗಳು ಬಹು ಶಕ್ತಿಗಳು. ಯಂತ್ರಗಳು ಕಾರ್ಯನಿರ್ವಹಿಸುವಂತೆಯೆ ಆ ಬಹು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ನೀವು ಅಲ್ಲಿ ವ್ಯಕ್ತಿಯ ಶಕ್ತಿ ಅಥವಾ ಪ್ರಭಾವವನ್ನು ಗ್ರಹಿಸಬಹುದು. ನೀವು ವಿಮಾನವನ್ನು ನೋಡಿದರೆ, ಅಲ್ಲಿ ಪೈಲಟ್ ಕುಳಿತು ಒಂದು ಬಟನ್ ಅನ್ನು ಒತ್ತುತ್ತಾನೆ; ತಕ್ಷಣ ವಿಮಾನ ತಿರುಗುತ್ತದೆ, ಅಂತಹ ದೊಡ್ಡ ಯಂತ್ರವು ಬಟನ್ ಅನ್ನು ಒತ್ತಿದ ತಕ್ಷಣ ತಿರುಗುತ್ತದೆ. ಆದ್ದರಿಂದ, ಇದು ಒಂದು ಶಕ್ತಿಯ ಕಾರ್ಯ. ಅಂತೆಯೆ, ಬಟನ್ ಅನ್ನು ಒತ್ತುವ ಮೂಲಕ ಈ ಇಡೀ ಭೌತಿಕ ಜಗತ್ತು ಕಾರ್ಯನಿರ್ವಹಿಸುತ್ತಿದೆ. ಅದು ಸ್ವಯಂಚಾಲಿತವಾಗಿ ಅಥವಾ ಆಕಸ್ಮಿಕವಾಗಿ ನಡೆಯುತ್ತಿದೆ ಎಂದು ಭಾವಿಸಬೇಡಿ. ಅವೆಲ್ಲ ಧೂರ್ತತನ. ಎಲ್ಲೆಡೆ ʼಕೈʼ ಇದೆ."
|