ಈ ಭೂರ್ಲೋಕದ ಮೇಲೆ, ಭುವರ್ಲೋಕ, ಜನಲೋಕ, ತಪೋಲೋಕ, ಮತ್ತು ಮಹರ್ಲೋಕಗಳಿತ್ತವೆ. ಅನೇಕ ಲೋಕಗಳಿವೆ. ಮತ್ತು ಕೆಳಗೆ, ತಳ, ಅತಳ, ವಿತಳ, ಪಾತಾಳ, ತಲಾತಳ, ಇತ್ಯಾದಿ. ನೀವು ಕೆಳಕ್ಕೆ ಹೋಗಲು ಬಯಸಿದರೆ, ಹೋಗಬಹುದು. ನೀವು ಮೇಲಕ್ಕೆ ಹೋಗಲು ಬಯಸಿದರೆ, ಹೋಗಬಹುದು. ಊರ್ಧ್ವಂ ಗಚ್ಛಂತಿ ಸತ್ವ... (ಭ.ಗೀ 14.18). ಎಲ್ಲವೂ ಇದೆ; ನೀವು ಏನಾದರು ಮಾಡಬಹುದು. ಮಾನವ ಸಮಾಜದಲ್ಲಿ ನೀವು ಹೈಕೋರ್ಟ್ ನ್ಯಾಯಾಧೀಶರಾಗಲು ಬಯಸಿದರೆ, ನೀವು ಆಗಬಹುದು. ನೀವು ಅಪರಾಧಿಯಾಗಲು ಬಯಸಿದರೆ, ಅದೂ ಆಗಬಹುದು. ಎಲ್ಲವೂ ಮುಕ್ತವಾಗಿದೆ. ನೀವು ಅಪರಾಧಿಯಾಗಿ, ಅಥವಾ ಯಾರಿಗಾದರು ಆದ್ಯತೆ ಕೊಟ್ಟು ಉಚ್ಚ ನ್ಯಾಯಾಲಯದ ನ್ಯಾಯಾದೀಶರಾಗಿ, ಎಂದು ಸರ್ಕಾರ ಹೇಳುವುದಿಲ್ಲ. ಇಲ್ಲ. ಎಲ್ಲವೂ ನಿಮ್ಮ ಕೈಯಲ್ಲಿದೆ. ನೀವು ಹೇಗೆ ಬಯಸಿದರೆ, ಹಾಗೆ ಆಗಬಹುದು. ಅದೇ ರೀತಿ, ನೀವು ಬಯಸಿದರೆ ನಿಮ್ಮ ನಿಜವಾದ ಮನೆಗೆ, ಅಂದರೆ ಭಗವದ್ಧಾಮಕ್ಕೆ ಹಿಂತಿರುಗಬಹುದು. ಅದೇ ಜೀವನದ ಪರಿಪೂರ್ಣತೆ. ಆದರೆ ನಿಮಗೆ ಇಷ್ಟವಿಲ್ಲದಿದ್ದರೆ, ಇಲ್ಲಿಯೇ ಇರಿ. ಆದ್ದರಿಂದ, ಕೃಷ್ಣ ಹೇಳುತ್ತಾನೆ, ಅಪ್ರಾಪ್ಯ ಮಾಂ ನಿವರ್ತಂತೆ ಮೃತ್ಯು–ಸಂಸಾರ ವರ್ತ್ಮನಿ (ಭ.ಗೀ 9.3). ನೀವು ಮನೆಗೆ ಹೇಗೆ ಹಿಂತಿರುಗಬಹುದು, ಮರಳಿ ಭಗವದ್ಧಾಮಕ್ಕೆ, ಎಂಬುದರ ಬಗ್ಗೆ ಉತ್ತಮ ಶಿಕ್ಷಣ ನೀಡಲು ಕೃಷ್ಣ ನಿಮ್ಮ ಬಳಿಗೆ ಬಂದಿದ್ದಾನೆ. ಮರಳಿ ಭಗವದ್ಧಾಮಕ್ಕೆ. ಅದೇ ಕೃಷ್ಣನ ಧ್ಯೇಯ."
|