"ಕೃಷ್ಣ ಕಪ್ಪು, ಆದರೂ ನಾವು ಆತನನ್ನು ಆರಾಧಿಸುತ್ತೇವೆ. (ನಗು) ನೀವು ನಮ್ಮ ಮೂರ್ತಿಯನ್ನು ನೋಡಿದ್ದೀರಾ? ಹೌದು. ಕೃಷ್ಣ ನಿಮ್ಮ ಸಮುದಾಯದವನು. (ಪ್ರಭುಪಾದರು ನಗುತ್ತಾರೆ) ಕಪ್ಪು ಅಥವಾ ಬಿಳಿ ಪ್ರಶ್ನೆಯೇ ಇಲ್ಲ. ಕೃಷ್ಣ ಪ್ರಜ್ಞೆಯು ಚರ್ಮದ ಬಣಕ್ಕೆ ಅತೀತವಾಗಿದೆ – ಆತ್ಮಕ್ಕೆ ಸಂಬಂಧಿತವಾಗಿದೆ. ಅವನು ಕಪ್ಪು, ಅಥವಾ ಬಿಳಿ, ಅಥವಾ ಹಳದಿ ಬಣ್ಣದವನೆ ಎಂಬುದು ಮುಖ್ಯವಲ್ಲ. ದೇಹಿನೋ ಅಸ್ಮಿನ್ ಯಥಾ ದೇಹೇ (ಭ.ಗೀ 2.13). ಇದು ಪ್ರಥಮ ಪಾಠ - ದೇಹವನ್ನು ಗ್ರಹಿಸಬೇಡಿ, ದೇಹದೊಳಗಿನ ಚೈತನ್ಯವನ್ನು ಗ್ರಹಿಸಿ. ಅದು ಮುಖ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಆ ಆಧ್ಯಾತ್ಮಿಕ ಮಟ್ಟದಿಂದ ಮಾತನಾಡುತ್ತಿದ್ದೇವೆ. ಆದ್ದರಿಂದ, ಕೆಲವೊಮ್ಮೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ, ಏಕೆಂದರೆ ಜನರು ದೇಹಾತ್ಮಾಭಿಮಾನದಲ್ಲಿ ಹೆಚ್ಚು ಲೀನರಾಗುತ್ತಾರೆ. ಆದರೆ ಎಲ್ಲಿ ದೇಹಾತ್ಮಾಭಿಮಾನವಿಲ್ಲವೊ, ಆ ಮಟ್ಟದಿಂದ ನಮ್ಮ ತತ್ತ್ವವು ಪ್ರಾರಂಭವಾಗುತ್ತದೆ."
|