KN/Prabhupada 1074 - ಈ ಐಹಿಕ ಜಗತ್ತಿನಲ್ಲಿ ನಾವು ಅನುಭವಿಸುವ ಎಲ್ಲಾ ಕಷ್ಟಗಳಿಗೆ ದೇಹವೇ ಕಾರಣ



660219-20 - Lecture BG Introduction - New York

ಗೀತೆಯಲ್ಲಿ ಬೇರೊಂದು ಕಡೆ ಹೀಗೆ ಹೇಳಿದೆ. ಅವ್ಯಕ್ತೋಕ್ಷರ ಇತ್ಯುಕ್ತ್ಸ್ಸಮಾಹುಃ ಪರಮಾಮ್ ಗತಿಮ್ ಯಮ್ ಪ್ರಾಪ್ಯ ನ ನಿವರ್ತಾಂತೆ ತದ್ಧಾಮ ಪರಮಂ ಮಮ (ಭ ಗೀತೆ 8.21) ಅವ್ಯಕ್ತ ಎಂದರೆ ವ್ಯಕ್ತವಾಗದಿರುವುದು. ಐಹಿಕ ಜಗತ್ತಿನ ಭಾಗವೂ ಕೂಡ ನಮ್ಮ ಮುಂದೆ ವ್ಯಕ್ತವಾಗಿಲ್ಲ. ನಮ್ಮ ಇಂದ್ರಿಯಗಳು ಎಷ್ಟು ಅಪರಿಪೂರ್ಣ ಎಂದರೆ ಈ ಐಹಿಕ ವಿಶ್ವದಲ್ಲಿ ಎಷ್ಟು ನಕ್ಷತ್ರಗಳಿವೆ, ಎಷ್ಟು ಗ್ರಹಗಳಿವೆ ಎಂದು ಕೂಡ ನಮಗೆ ನೋಡಲಾಗದು. ವೈದಿಕ ಸಾಹಿತ್ಯದಲ್ಲಿ ಎಲ್ಲಾ ಗ್ರಹಗಳ ಬಗ್ಗೆ ನಮಗೆ ಮಾಹಿತಿ ದೊರೆಯುತ್ತದೆ. ನಾವು ನಂಬುತ್ತೇವೋ ಇಲ್ಲವೋ, ಆದರೆ ನಮಗೆ ಸಂಬಂಧವಿರುವ ಎಲ್ಲಾ ಗ್ರಹಗಳ ಮಾಹಿತಿ ವೈದಿಕ ಸಾಹಿತ್ಯ, ಶ್ರೀಮತ್ ಭಾಗವತಂನಲ್ಲಿ ಇದೆ. ಭೌತಿಕ ಆಕಾಶದಾಚೆ ಇರುವ ಆಧ್ಯಾತ್ಮಿಕ ಜಗತ್ತನ್ನು ಪರಸ್ ತಸ್ಮಾತ್ ತು ಭಾವ ಅನ್ಯೋ (ಭ ಗೀತೆ 8.20) ಅವ್ಯಕ್ತ, ವ್ಯಕ್ತವಾಗದಿರುವುದು ಎಂದು ವರ್ಣಿಸಿದೆ. ಮನುಷ್ಯನಾದವನು ಆ ಪರಂಗತಿ (ಪರಮ ಸಾಮ್ರಾಜ್ಯಕ್ಕಾಗಿ) ಹಂಬಲಿಸಬೇಕು. ಆ ಪರಮ ಸಾಮ್ರಾಜ್ಯವನ್ನು ಒಮ್ಮೆ ಸೇರಿದರೆ (ಯಮ್ ಪ್ರಾಪ್ಯ) ನಾ ನಿವರ್ತಾಂತೆ, ಈ ಐಹಿಕ ಜಗತ್ತಿಗೆ ಹಿಂದಿರುಗಬೇಕಾಗಿಲ್ಲ.. ಭಗವಂತನ ಶಾಶ್ವತ ಧಾಮವಾದ ಆ ಸ್ಥಳವನ್ನು ಸೇರುವುದು ನಮ್ಮ ಗುರಿಯಾಗಿರಬೇಕು. ಭಗವಂತನ ನಿವಾಸವನ್ನು ಸಮೀಪಿಸುವುದು ಹೇಗೆ ಎಂದು ಪ್ರಶ್ನಿಸಬಹುದು. ಗೀತೆಯಲ್ಲಿ ಹೀಗೆ ಹೇಳಿದೆ. 8ನೇ ಅಧ್ಯಾಯ 5,6,7,8, ಭಗವಂತನನನ್ನು, ಭಗವಂತನ ನಿವಾಸವನ್ನು ಸಮೀಪಿಸುವ ಪ್ರಕ್ರಿಯೆಯನ್ನು ಹೀಗೆ ಹೇಳಿದ್ದಾರೆ. ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಲೇವರಂ ಯಹ ಪ್ರಯಾತಿ ಸ ಮಾದ್ಭಾವಂ ಯಾತಿ ನಾಸ್ಥ್ಯತ್ರ ಸಂಶಯಃ ಅಂತಕಾಲೇ, ಜೀವನ ಅಂತಿಮದಲ್ಲಿ, ಸಾವಿನ ಸಮಯದಲ್ಲಿ ಅಂತಕಾಲೇ ಚ ಮಾಮೇವ ಯಾರು ಕೃಷ್ಣನನ್ನು ಸ್ಮರಿಸುತ್ತಾನೋ ಸಾಯುವ ಸಮಯದಲ್ಲಿ ವ್ಯಕ್ತಿಯು ಕೃಷ್ಣನ ರೂಪವನ್ನು ಸ್ಮರಿಸಿದರೆ ಹಾಗೆ ಸ್ಮರಿಸುತ್ತಾ ತನ್ನ ದೇಹವನ್ನು ತ್ಯಜಿಸಿದರೆ ಅವನು ಖಂಡಿತವಾಗಿಯೂ ಆಧ್ಯಾತ್ಮಿಕ ಲೋಕವನ್ನು ಪಡೆಯುವನು, ಮದ್ ಭಾವಂ ಭಾವಂ ಎಂದರೆ ಆಧ್ಯಾತ್ಮಿಕ ಪ್ರಕೃತಿ. ಯಹ ಪ್ರಯಾತಿ ಸ ಮಾದ್ಭಾವಂ ಯಾತಿ ಮದ್ ಭಾವಂ ಎಂದರೆ ಪರಮ ಪುರುಷನ ಆಧ್ಯಾತ್ಮಿಕ ಪ್ರಕೃತಿ. ಮೇಲೆ ಹೇಳಿರುವಂತೆ ಪರಮ ಪುರುಷ ಸತ್ ಚಿತ್ ಆನಂದ ವಿಗ್ರಹ (ಬ್ರ ಸಂ 5.1) ಅವನಿಗೆ ರೂಪವಿದೆ, ಆದರೆ ಅವನ ರೂಪ ಸನಾತನ, ಶಾಶ್ವತವಾದ ರೂಪ. ಚಿತ್, ಜ್ಞಾನಾಪೂರ್ಣ ಮತ್ತು ಆನಂದಪೂರ್ಣ ನಮಗಿರುವ ದೇಹ ಸತ್ ಚಿತ್ ಆನಂದವೇ ಎಂದು ಈಗ ನೋಡಬೇಕು. ಇಲ್ಲ, ಈ ದೇಹ ಅಸತ್, ಸತ್ ಆಗಿರುವ ಬದಲು ಅಸತ್ ಆಗಿದೆ. ಅಂಥವಂತ ಇಮೇ ದೇಹ (ಭ ಗೀತೆ 2.18), ಈ ದೇಹ ಅಂಥವತ್, ನಾಶವಾಗುವಂತಹುದು. ಸತ್ ಚಿತ್ ಆನಂದ, ಸತ್ ಆಗಿರುವ ಬದಲು ಅಸತ್ ವಿರುದ್ಧವಾಗಿದೆ. ಜ್ಞಾನಾಪೂರ್ಣವಾಗಿರುವ ಬದಲು ಅಜ್ಞಾನದಲ್ಲಿದೆ. ನಮಗೆ ಆಧ್ಯಾತ್ಮಿಕ ಜಗತ್ತಿನ ಜ್ಞಾನವಿಲ್ಲ ನಮಗೆ ಈ ಭೌತಿಕ ಪ್ರಪಂಚದ ಪೂರ್ಣ ಜ್ಞಾನವೂ ಇಲ್ಲ. ಎಷ್ಟೊಂದು ವಿಷಯಗಳು ನಮಗೆ ತಿಳಿದಿಲ್ಲ, ಆದ್ದರಿಂದ ಈ ದೇಹ ಅಜ್ಞಾನಿ. ಜ್ಞಾನಾಪೂರ್ಣವಾಗಿರುವ ಬದಲು ಅಜ್ಞಾನದಲ್ಲಿದೆ. ದೇಹ ನಾಶವಾಗುವಂತಹುದು, ಅಜ್ಞಾನದಿಂದ ಕೂಡಿದೆ, ಮತ್ತು ನಿರಾನಂದ. ಆನಂದದಿಂದ ತುಂಬಿರುವ ಬದಲು ಕಷ್ಟಗಳಿಂದ ಕೂಡಿದೆ. ಈ ಐಹಿಕ ಜಗತ್ತಿನಲ್ಲಿ ನಾವು ಅನುಭವಿಸುವ ಎಲ್ಲಾ ಕಷ್ಟಗಳಿಗೆ ದೇಹವೇ ಕಾರಣ.